Sharanappa g patil2022/04/02 17:27
Follow

ಮನುಷ್ಯ ತನ್ನ ಜೀವನದುದ್ದಕ್ಕೂ ಪಾಪ ಕರ್ಮಗಳನ್ನು ಮಾಡುತ್ತಲೇ ಬರುತ್ತಾನೆ.ಪಾಪ ಯಾವುದು ಪುಣ್ಯ ಯಾವುದು ಗೊತ್ತಿದ್ದರು ಸಹ ಅವನಿಗೆ ಯಾರ ಭಯವಿಲ್ಲದೆ ಪಾಪದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾನೆ.ಕೊನೆಗೆ ಈ ಪಾಪದ ಬುತ್ತಿಯ ಹೊರೆಯನ್ನು ಕಳೆಯುವ ಸಲುವಾಗಿ ಪುಣ್ಯಕ್ಷೇತ್ರಕ್ಕೆ ಹೋಗಿ ಅಲ್ಲಿನ ಪವಿತ್ರ ನದಿಯಲ್ಲಿ ಮಿಂದರೆ ತನ್ನ ಪಾಪದ ಹೊರೆ ದುರಾಗುವುದು ಎಂದು ತಿಳಿಯುತ್ತಾನೆ. ಇದರ ಪರಿಣಾಮವಾಗಿ ತಾನು ಉಟ್ಟ ಬಟ್ಟೆ, ಕೇಶ,ಎಲ್ಲವನ್ನು ನದಿಯಲ್ಲಿ ಬಿಟ್ಟು ಬರುತ್ತಾನೆ.ಇದರಿಂದಾಗಿ ನದಿಯು ಮಲಿನವಾಗಿ ತನ್ನ ವ್ಯತೆಯನ್ನು ತೋಡಿಕೊಂಡಿರುವ ಕುರಿತು ಈ ಕವನ.

ಗಂಗೆ

ಗಂಗೆ

ಇದ್ದೆ ಆರಾಮ

ನೆನೆದೆ ಶ್ರೀರಾಮ

ಕಾಯ ಮಲಿನ ಕಳೆಯುವರಿಲ್ಲ

ಪುಣ್ಯ ಶಿಖರ

ಜನ್ಮ ಜನನಿ

ಎನ್ನ ಮುಟ್ಟಿ

ಪಾಪ ಬುಟ್ಟಿ

ಕಳವೇ ರಾಶಿಯಾಗೆ

ಎಲುಬಿನ ರಾಶಿ

ಎಲ್ಲರಿಂದ ಅಂತರ

ಹೀನಳಾಗಿ ನಿಂತವಳೇ

ನಾನೇ ಗಂಗೆ.

ಮುಟ್ಟಿದರೆ ಮೂರು ರೋಗ

ಮಿಂದರೆ ಮೈಯಲ್ಲ ರೋಗ

ಸ್ವಾರ್ಥವ ಮೆರೆದು

ಮಲಿನವ ನೀಡಿದ

ಈ ನರ ಪ್ರಾಣಿ .

Support this user by tipping bitcoin - How to tip bitcoin?

Send bitcoin to this address

Comment (0)

Advertisements